ಒಂದು ತಿಂಗಳ ಬಳಿಕವೂ ಈ ಹಕ್ಕಿಯ ವ್ಯಾಮೋಹ ಹೋಗಲಿಲ್ಲ. ಮತ್ತೆ ಅದೇ ಜಾಗಕ್ಕೆ ಹುಡುಕುತ್ತಾ ಹೊರಟೆ. ಅದೇ ಎರಡು ದಿನಗಳ ಹಿಂದೆ ಬರ್ಜರಿಮಳೆಯಾಗಿ ಕೆರೆಯ ಮಣ್ಣೆಲ್ಲಾ ಕೆಸರಾಗಿ ಜಾರುತಿತ್ತು. ನನ್ನ Gypsyಯ ಮೇಲಿನ ಅತಿಯಾದ ಭರವಸೆಯೊಂದಿಗೆ ಕೆರೆಯ ಅಂಚಿನಲ್ಲಿ, ನೀರಿನಲ್ಲಿ, ಕೆಸರಿನಲ್ಲಿ ಓಡಿಸುತ್ತಾ ಹಳ್ಳಕ್ಕಿಳಿಸಿ ಹೇಗೋ ಮುಂದೆ ಬಂದೆ; ಖುಷಿಪಟ್ಟೆ. Gypsyಯಿಂದಾಗಿ off road driving ಹುಚ್ಚು ಹೆಚ್ಚಾಗಿದೆ!

ಹತ್ತಿರತ್ತಿರ ಮಣ್ಣಿನ ಬಣ್ಣಕ್ಕೆ ಸನಿಹದಲ್ಲೆ ಇರುವ ಈ Pratincole ಹತ್ತಿರದಲ್ಲೆ ಇದ್ದರೂ ಗಮನಿಸದೇ ನನ್ನ Gypsyಯನ್ನು ನಿಲ್ಲಿಸಿದ್ದೆ. ಇಲ್ಲೇ ಪಕ್ಕದಲ್ಲಿಏನೋ ಸದ್ದು ಕೇಳಿಸಿ ನೋಡಿದರೆ, ಕುಂಡೆ ಕುಲುಕಿ ಕಿ..ರ್..ರ್... ಕಿ..ರ್..ರ್... ಎನ್ನುತ್ತಿದೆ. ಕಂಡ ಸಂತೋಷಕ್ಕೆ ಗಾಡಿಯನ್ನು ಬಂದ್ ಮಾಡಿ ನೋಡುತ್ತಾ ಕುಳಿತೆ. ಸ್ವಲ್ಪ ಸಮಯದ ನಂತರ ಗಮನಿಸಿದರೆ ಅಲ್ಲಿ ದೊಡ್ಡ ದಂಡೇ ಇದೆ!! ಅವುಗಳ ಕಾಲನಿಯಲ್ಲಿ ನನ್ನ ಕಂಡು ಕೊಂಚ ಗೊಂದಲಗೊಂಡು ಎಲ್ಲವೂ ನನ್ನೇ ನೋಡಿ ನಿಂತು; ಯಾರಿವನು dream boy ಎಂದು ಚರ್ಚೆ ಪ್ರಾರಂಭಿಸಿದಂತೆ ಅನ್ನಿಸಿತು!

ಆ ಗುಂಪಿನಲ್ಲಿ ಒಂದು ಹಕ್ಕಿಯಂತು ನನ್ನ ಇರುವಿಕೆಗೆ ತೀವ್ರ ಅಸಮಧಾನಗೊಂಡು ಧುರುಗುಟ್ಟುತಿತ್ತು. ಸಹಜವಾಗಿಯೇ ನನ್ನ ಗಮನ ಅದರೆಡೆಗೆ ಹೋಯಿತು. ನಾನು ಕೂಡ ಏನಿವಾಗ ಎನ್ನುವರೆಸೆಯಲ್ಲಿ ನೋಡಿದೆ. ಸ್ವಲ್ಪ ಸಮಯದಲ್ಲೇ ಅದರ ರೆಕ್ಕೆಯೊಳಗಿಂದ ಎರಡು ಪುಟ್ಟ ಜೀವಗಳು ಹೊರ ಇಣುಕಿದವು!! ಈಗ ನನಗೆ ಇದರ ಅಸಮಧಾನದ ಕಾರಣ ತಿಳಿಯಿತು. ನಾಲ್ಕೈದು ಸಣ್ಣಕಲ್ಲುಗಳ ಗುಡ್ಡೆ ಸಂದು ತನ್ನ ಮರಿಗಳನ್ನು ಅಡಗಿಸಿಟ್ಟುಕೊಂಡಿದೆ! ನನ್ನ ಕೆಮೆರಾ ಸದ್ದುಮಾಡಲು ಶುರುಮಾಡಿತ್ತು. ಗಾಡಿಯೊಳಗೆ ಕುಳಿತು ಕ್ಲಿಕ್ಕಿಸಿದ angel ನನಗೆ ಸಮಾಧಾನ ಕೊಡಲಿಲ್ಲ. ಕೆಳಗಿಳಿದರೆ ಈ ಮಹಾತಾಯಿಗೆ ಇನ್ನೂ ಹೆಚ್ಚು ಕೋಪವೇರಿ, ಆ ಕೋಪಕ್ಕೆ ನಾನು ಗುರಿಯಾಗುವ ಸ್ಥಿತಿ. ಈ ಉಬಯ ಸಂಕಟದಲ್ಲೇ Gypsyಯಿಂದ ಕೆಳಗಿಳಿದೆ. ನನಗೆ ಹಿಡಿ ಶಾಪವಾಕುತ್ತಾ, ಬೈದಾಡುತ್ತಾ ಗಿರಿಕಿ ಹೊಡೆಯಲು ಶುರು ಮಾಡಿದಳು!
Pratincole ನಾನು ಎಂದಿನಂತೆ ಜಿಪ್ಸಿ ಸಂದಿಯಲ್ಲಿ ಮಲಗಿಕೊಂಡು ಮರಿಗಳ ಚಿತ್ರ ಕ್ಲಿಕ್ಕಿಸಿದೆ. ಈಕೆಯ ಚೀರಾಟ ಗಮನಿಸಿದ ಆಕೆಯ ಪ್ರಿಯಕರನೂ ಬಂದು ನನ್ನ ಸುತ್ತ ಗಿರಕಿ ಹೊಡೆಯಲು ಪ್ರಾರಂಭಿಸಿದ. ಸ್ವಲ್ಪ ಸಮಯ ನಾನು ಹಾಗೆಯೇ ಸ್ತಬ್ದನಾದೆ. ಆಕೆ ಮರಿಗಳ ಹತ್ತಿರ ಕೆಳಗಿಳಿದು ಮರಿಗಳ ಸೇರಿಕೊಂಡಳು. ಆಕೆಯ ಪ್ರಿಯಕರ ಗಿರಕಿಮುಂದುವರಿಸಿದ. ನಾನು ನಿಧಾನಗತಿಯಲ್ಲಿ ಇನ್ನೂ ಸನಿಹವಾಗುವ ಪ್ರಯತ್ನ ನಡೆಸಿದೆ. ಆಕೆಗೆ ಎಲ್ಲಿಲ್ಲದಸಿಟ್ಟು ಬಂದು ಸ್ವಲ್ಪ ದೂರ ಸರಿದಳು, ಈಗ ಏನು ಮಾಡಬಹುದು ಎಂದು ಕಾದು ಕುಳಿತೆ. ಮರಿಗಳು ಯಾವುದೇ ಚಲನೆಯಿಲ್ಲದೆ ಸ್ತಬ್ದವಾಗಿದ್ದವು. ಕಲ್ಲುಗಳ ಜೊತೆ ಅವುಗಳನ್ನುಗುರುತಿಸುವುದೂ ಕಷ್ಟವಾಗಿತ್ತು. ಮರಿಗಳಿಂದ ಸರಿಯಾಗಿ ಎರಡು ಮಾನವನ ಹೆಜ್ಜೆಗಳ ಅಂತರದಲ್ಲಿ ಒಂದು ರೀತಿಯ ಗುಟುರುದನಿಯಲ್ಲಿ ಕೂಗಿದಳು, ಇಲ್ಲಿವರೆಗೂ ಸ್ತಬ್ದವಾಗಿದ್ದ ಮರಿಗಳು ಚಂಗನೆ ಎದ್ದು ತನ್ನ ತಾಯಿಯೆಡೆಗೆ ನಡೆಯಲು ಶುರುಮಾಡಿದವು. ನಡೆಯಲೂ ಆಗದ ಪುಟ್ಟ ಜೀವಗಳು ಹೇಗೋ ಬಿದ್ದು, ಎದ್ದು ತೆವಳಿ ತಾಯಿಯ ರೆಕ್ಕೆಯೊಳಗೆ ಸೇರಿಕೊಂಡವು. ನನ್ನ ಮೇಲೆ ಗಂಡುಹಕ್ಕಿಯ ಹಾರಾಟ, ಚೀರಾಟ ಮುಂದುವರೆದಿತ್ತು. ಸ್ವಲ್ಪ ಚಲನೆಯನ್ನು ನೀಡಿದರೂ ವಿರೋಧ ವ್ಯಕ್ತಪಡಿಸುತ್ತಾ ಆಕ್ರಮಣಕಾರಿಯಾಗಿ ನನ್ನತ್ತ ನುಗ್ಗಿ ಹಿಮ್ಮೆಟ್ಟಿಸುವ ಪ್ರಯತ್ನ ಆತ ಮಾಡುತ್ತಿದ್ದ.
ನಾನು ಮತ್ತೆ ಚಲನೆ ನೀಡದೆ ಮಲಗಿಗಮನಿಸುತ್ತಿದ್ದೆ. ತಾಯಿ ಹಕ್ಕಿಯು ಮತ್ತೆ ಎರಡುಹೆಜ್ಜೆಯಷ್ಟು ದೂರಹೋಗಿ ಅದೇ ಗುಟುರುದನಿಯಲ್ಲಿ ಮರಿಗಳನ್ನು ಕರೆದು ಅಲ್ಲಿಗೆ ತನ್ನಮರಿಗಳನ್ನು ಕರೆಸಿಕೊಂಡಿತು. ಅದರ ಗೂಡಿಂದ ಸುಮಾರು ಆರು ಮಾನವ ಹೆಜ್ಜೆಯಷ್ಟು ಸುರಕ್ಷಿತ ಅಂತರ ಕಾಪಾಡಿಕೊಂಡು ತನ್ನ ರೆಕ್ಕೆಯೊಳಗೆ ತನ್ನಮರಿಗಳನ್ನು ಅವಿತುಕೊಂಡು ಕುಳಿತುಕೊಂಡಿತು.

ಇನ್ನೂ ಹೆಚ್ಚಿಗೆ ತೊಂದರೆಕೊಡಲು ಬಯಸದೇ ಸುಮ್ಮನೆ ಗಮನಿಸುತ್ತಾ ಕುಳಿತೆ. ಅಷ್ಟರೊಳಗೆ ನನ್ನ ಸ್ನೇಹಿತನ ಆಗಮನವಾಯಿತು. ಅವನಲ್ಲಿ ಸಣ್ಣ ವಿಡಿಯೋ ಕೆಮೆರಾ ಇತ್ತು ಅದರ ಸಹಾಯದಿಂದ ನನ್ನ ಮೊದಲನೇ ವಿಡಿಯೋ ಚಿತ್ರೀಕರಣ ಮಾಡಿದೆ. ಮರಿಗಳ ರಕ್ಷಣೆ, ಮರಿಗಳ ತಾಯಿ ಬಳಿಹೋಗುವ ಪರಿ... ವ್ವಾ.. ಪ್ರಕೃತಿ ಮಾತೆಗೆ ಶರುಣು. ವಿಡಿಯೋ ನೋಡಿ.
ನಂತರ ಇಲ್ಲಿಂದ ಹೊರಟು ವಾಪಸ್ಸಾಗುವ ಮನಸ್ಸು ಮಾಡಿ ಹೊರಟೆವು. ಕೆರೆಯ ಅಂಚಿನಲ್ಲಿ ಒಂದು ಹಳ್ಳಕ್ಕೆ ನಮ್ಮ Gypsyಯನ್ನು ಇಳಿಸಿ ಅದು ಅಲ್ಲೇ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿತು. ಮುಂದೆ ಹೋಗಲಾಗದೇ, ಹಿಂದೆಯೂ ಬರಲಾರದೇ ನನ್ನ ಕೈಲಾಗುವುದಿಲ್ಲವೆಂದು ಅಲ್ಲೇ ನಿಂತು ಬಿಟ್ಟಿತು. ಆಗ ಪಕ್ಕದ ಹಳ್ಳಿಗೆ ಸುಮಾರು ಒಂದೂವರೆ ಕಿ.ಮೀ ನೆಡೆದು ಹೋಗಿ ಅಲ್ಲಿ ಒಬ್ಬ ಮಹಾತ್ಮರ ಸಹಾಯ ಪಡೆದು Tractorರನ್ನು ಕರೆಸಿ Gypsyಯನ್ನು ಆಚೆ ಎಳೆಸಿ ಹೇಗೋ ಬೇರೆ ರಸ್ತೆಯಲ್ಲಿ ಹೊರಬಂದೆವು! ಇಷ್ಟಾಗುವಷ್ಟರಲ್ಲಿ ಗುಡ್ಡದ ತುದಿಯಿಂದ ಸೂರ್ಯ ನೆತ್ತಿಯ ಮೇಲೆ ಬಂದಿದ್ದ!
ನಂತರ ಇದು ಆ ಮಹಾತಾಯಿಯು ನೀಡಿದ ಶಾಪದ ಫಲವೆಂದು ಯೋಚಿಸುತ್ತಾ ಸಮಾಧಾನಪಟ್ಟುಕೊಂಡೆವು...!
ಈಗ ಆ ಮರಿಗಳು ದೊಡ್ಡದಾಗಿವೆ... ಹಾರುವುದ ಕಲಿತಿವೆ.
ನಮ್ಮ ಅಗ್ನಿಯವರು ಈ Pratincoleಗೆ "ಕವಲುಬಾಲದ ಚಿಟವ" ಎಂದು ಕನ್ನಡದಲ್ಲಿ ಕರೆದಿದ್ದಾರೆ. ನಾನೂ ಅದೇ ಹೆಸರನ್ನು ಮುಂದುವರಿಸುತ್ತೇನೆ. ಈ ಚಿಟವದ ಬಗ್ಗೆ ಕೆಲವು ಮಾಹಿತಿ. ಈ ಹಕ್ಕಿಗೆ ನಾಚಿಕೆ ಜಾಸ್ತಿ. ನಿಮ್ಮನ್ನು ಕಂಡ ಕೂಡಲೇ ನಾಚಿ ದೂರಾಗುತ್ತವೆ! ಇವು ಹೆಚ್ಚಾಗಿ ಸಮುದ್ರದ ಅಂಚಲ್ಲಿ ಅಥವಾ ನಿಮ್ಮೂರಿನ ಕೆರೆಯ ಅಂಚಲ್ಲಿ ಕಂಡುಬರುತ್ತವೆ. ಸ್ವಲ್ಪ ಮರುಳು, ಸಣ್ಣ ಕಲ್ಲುಗಳು ಮಿಶ್ರಿತ ಕೊಂಚ ಕೆಸರು ಪ್ರದೇಶ್ ಇಷ್ಟ. ನೀರಿನಲ್ಲಿರುವ ಸಣ್ಣ ಹುಳುಗಳು ಇವಕ್ಕೆ ಆಹಾರ. ಸಣ್ಣ ಹಣ್ಣು ಕಾಯಿಗಳೂ ಪ್ರಿಯ. ಕಣ್ಣಿಗೆ ಬಿಳಿ ಕಾಡಿಗೆ, ಕೊಕ್ಕಿನಲ್ಲೊಂದಿಷ್ಟು ಕೆಂಪು ಬಣ್ಣ ಕಪ್ಪು ಗೆರೆಯ ಬಾಲ ಮತ್ತು ಬೂದುಮಿಶ್ರಿತ ಕಪ್ಪು ಬಣ್ಣದ ಕೊಕ್ಕು ಮತ್ತು ಕಾಲು ಇದರ ಗುಣ ಲಕ್ಷಣಗಳು.
ಸಂತಾನಭಿವೃದ್ದಿ ಸಾಮಾನ್ಯವಾಗಿ ದಿಸೆಂಬರ್ ನಿಂದ ಮೇ ತಿಂಗಳಾವಧಿಯಲ್ಲಿ ಎರಡರಿಂದ ನಾಲ್ಕು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತದೆ. ಸಾಮಾನ್ಯವಾಗಿ ನೀರಿನಂಚಿನಲ್ಲಿರುವ ಸಣ್ಣಕಲ್ಲುಗಳ ಗುಡ್ಡೆ ಸಂದುಗಳಲ್ಲಿ ಕಲ್ಲಿನಂತೆಯೇಕಾಣುವ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ.
ಈ ಚಿಟವಕ್ಕಿ ದಕ್ಷಿಣ ಭಾರತದಲ್ಲಿ, ಉತ್ತರಕರ್ನಾಟಕ, ಕೇರಳಾ ಮತ್ತು ಕಣ್ಣೂರು ಪ್ರದೇಶಗಳಲ್ಲಿ ಜಾಸ್ತಿಯಾಗಿ ನೋಡಲುಸಿಗಬಹುದು.