About Me

Friday, March 23, 2012

ಕಲ್ಲು ಚಟಕ (Common Stone Chat)



ನಮ್ಮೂರಿನ ಕೆರೆದಂಡೆಯ ಯಾವುದೋ ಗಿಡದ ಮೇಲೆ ಕುಳಿತು ತನ್ನ ಆಕರ್ಷಕ ಬಣ್ಣದಿಂದ ಸೆಳೆವ ಈ ಕಲ್ಲು ಚಟಕ ನನ್ನನು ಆಕರ್ಷಿಸಿದ್ದು ಕೂಡ ಅದರ ಬಣ್ಣದಿಂದಲೇ! ನಮ್ಮ ಗುಬ್ಬಚ್ಚಿ ಗಾತ್ರದ ಈ  ಬಿಳಿ, ಕಪ್ಪು, ಕೆಮ್ಮಣ್ಣು, ಕಿತ್ತಳೆ ಬಣ್ಣದಿಂದ ಮಿರುಗುವ ಈ ಪುಟ್ಟ ಹಕ್ಕಿ  ನಮ್ಮೋರಿಗೆ ಚಳಿಗಾಲದ ಅತಿಥಿ. ಈ ರೀತಿ ಆಕರ್ಷಕ ಬಣ್ಣ ಸಂಯೋಜನೆ ಗಂಡಿಗೆ ಮಾತ್ರವಿದ್ದು, ಸಂತಾನಾಭಿವೃದ್ದಿ ಸಮಯದಲ್ಲಿ ಹೆಣ್ಣನ್ನು ಆಕರ್ಷಿಸಲು ಸಿಂಗರಿಸಿಕೊಳ್ಳುವ ಪ್ರಾಕೃತಿಕ ಸಹಜ ಸೊಬಗು! ಹೆಣ್ಣು ಹೊಳೆವ ಮಣ್ಣಿನ ಬಣ್ಣವಿದ್ದು, ಚುಕ್ಕೆಗಳಿಂದ ಕೂಡಿರುತ್ತದೆ. ಕೆಲವು ಮೂಲಗಳ ಪ್ರಕಾರ, ನಮ್ಮೂರಿನ ಕೆರೆಗಳಿಗೆ ಇವು ಸಾಮಾನ್ಯವಾಗಿ ಹಿಮಾಲಯ ಅಥವಾ ಜಪಾನಿನಿಂದ ಬರುತ್ತವೆ.


ಮುಂದಿನ ಬಾರಿ ಕೆರೆದಂಡೆಯಲ್ಲಿ, ಊರಾಚೆಯ ಬಯಲಲ್ಲಾಗಲಿ ನೀವು ಅಡ್ಡಾಡುವಾಗ ನಿಮ್ಮ ಕಣ್ಣಿಗೆನಾದರು ಕಂಡರೆ, ಹಾಗೆ ಕೊಂಚಹೊತ್ತು ಗಮನಿಸಿ ಅದರ ಬಣ್ಣ, ಕೂಗು, ಆಟ ನಿಜಕ್ಕೂ ಖುಷಿ ಕೊಡುತ್ತದೆ!



ಗೌರೀಶ ಕಪನಿ