ಪ್ರಿಯ ಸ್ನೇಹಿತರೆ, ಓದುಗರೆ.
ಗುರು, ಸಹೋದರ, ಗೆಳೆಯ ಲೋಕೇಶ್ ಮೊಸಳೆಯೊಂದಿಗೆ ನನ್ನ ಎರಡನೇ ವನ್ಯಜೀವಿ ಛಾಯಾಚಿತ್ರ ಪ್ರದರ್ಶನವನ್ನು ಇದೇ ಡಿಸೆಂಬರ್ 9 ರಿಂದ 15 ರವರೆಗೆ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿದೆ. ನಮ್ಮ ಪ್ರಕೃತಿ ಮತ್ತು ವನ್ಯಜೀವಿ ಜಗತ್ತಿನ ಹಾದಿಯಲ್ಲಿ ಸೆರೆಹಿಡಿದ ಸಾವಿರಾರು ಚಿತ್ರಗಳಲ್ಲಿ ಕೆಲವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿದ್ದೇವೆ.
ನಿಮ್ಮ ಗೆಳೆಯರು, ಕುಟುಂಬದವರೊಂದಿಗೆ ಬಂದು ಪ್ರದರ್ಶನ ವೀಕ್ಷಿಸಿ. ನಿಮ್ಮ ಆಗಮನ, ಸಂತೋಷ, ಒಂದಷ್ಟು ಹರಟೆ ನಮಗೆ ಖುಷಿ ತರುವುದು.
ಆಸಕ್ತ ನಿಮ್ಮ ಸ್ನೇಹಿತರಿಗೂ ತಿಳಿಸಿ, ಕರೆತನ್ನಿ...
ಒಂದು ಚಿತ್ರ, ಒಂದು ಭೇಟಿ, ಒಂದಷ್ಟು ಮಾತು, ಜೊತೆಗೊಂದಷ್ಟು ಪರಿಸರ ಪ್ರೀತಿ; ಸಮಾನ ಅಭಿರುಚಿಯ ಮನಸ್ಸುಗಳು ಬೆರೆಯಲು ಒಂದು ಅವಕಾಶ... ಮತ್ತಿನ್ನೇನು ಬೇಕು?!
ನಿಮಗಾಗಿ ಗ್ರೀಟಿಂಗ್ ಕಾರ್ಡುಗಳು, ಕ್ಯಾಲೆಂಡರುಗಳೂ ಸಹ ಮಾರಾಟಕ್ಕಿರುತ್ತದೆ. ಹೊಸ ವರ್ಷಕ್ಕೆ ಖುಷಿಯ ಜೊತೆಗೆ ಒಂದಷ್ಟು ಪ್ರಕೃತಿ ಪ್ರೀತಿಯೂ ಇರಲಿ.
ನಿಮ್ಮ ನಿರೀಕ್ಷೆಯಲ್ಲಿ...
ಗೌರೀಶ್ ಕಪನಿ
ಲೋಕೇಶ್ ಮೊಸಳೆ
Congratulations and All the best!
ReplyDeleteShubhashayagalu sir, Kanditha nanu bhagavayasuthene.
ReplyDeleteAkshay
vishaya tiLisiddakke dhanyavAdagaLu! khanDita nODuttEne!
ReplyDeleteಬಹಳ ದಿನಗಳಿಂದ ಹುಡುಕುತ್ತಿದ್ದ ಹಲವಷ್ಟು ಫೊಟೊಗಳನ್ನು ನೋಡುತ್ತಿದ್ದಂತೆನಿಸಿತು, ಅದ್ಭುತ ಫೋಟೋಗಳು, ಹಾಗೇ ಬ್ಲಾಗ್ ಕೂಡ. ನಿಮ್ಮ ಫೋಟೋಗಳನ್ನು ನೋಡುತ್ತ ಅವುಗಳೊಳಗೇ ಕಳೆದುಹೋದೆ.
ReplyDelete