About Me

Sunday, November 4, 2012

ಛಾಯಾಚಿತ್ರ ತರಬೇತಿ ಶಿಬಿರ 2012, ಮೈಸೂರು

ಛಾಯಾಚಿತ್ರ ತರಬೇತಿ ಶಿಬಿರ 2012, ಮೈಸೂರು

ಲೋಕೇಶ್ ಮೊಸಳೆಯವರು 

ಕಳೆದ ತಿಂಗಳು ಸೆಪ್ಟೆಂಬರ್ 29-30 ರಂದು ಆಯೋಜಿಸಿದ್ದ "ಛಾಯಾಚಿತ್ರ ತರಬೇತಿ ಶಿಬಿರ" ಯಶಸ್ವಿಯಾಗಿ ಪೂರ್ಣಗೊಂಡಿತು. ಎರಡು ದಿನಗಳ ಈ ಶಿಬಿರದಲ್ಲಿ ಛಾಯಾಗ್ರಹಣದ ವಿವಿಧ ಮಜಲುಗಳನ್ನು ಚರ್ಚಿಸಲಾಯಿತು. ಕೆಮೆರಾದ ಹಲವು ವಿಷಯಗಳನ್ನು ತಿಳಿಸಿಕೊಡಲಾಯಿತು. ಚಿತ್ರಗಳನ್ನು ನೋಡುವ ಬಗೆ, ಬೆಳಕು ಮತ್ತು ಸಂಯೋಜನೆಯ ಪ್ರಕಾರಗಳು, ಛಾಯಾಗ್ರಹಣದಲ್ಲಿ ಕಲೆಯ ಅಭಿವ್ಯಕ್ತಿಯ ಸಾಧ್ಯತೆಗಳು, ಸಮಾಜದಲ್ಲಿ ಛಾಯಾಗ್ರಾಹಕನ ಜವಾಬ್ದಾರಿಗಳು, Photoshop ಬಳಸಿ ಛಾಯಾಚಿತ್ರ ಸಂಸ್ಕರಣೆ ಮತ್ತು ಅದರ ಸಾದಕ - ಬಾದಕಗಳು ಹೀಗೆ ಹಲವು ವಿಷಯಗಳ ಚರ್ಚೆ ಅಭಿಪ್ರಾಯ ವಿನಿಮಯಗಳು ಶಿಬಿರವನ್ನು ಹೆಚ್ಚು ಕ್ರಿಯಾಶೀಲವನ್ನಾಗಿಸಿತು.

ಇದರ ಜೊತೆಗೆ ಶ್ರೀ ಕೃಪಾಕರ - ಸೇನಾನಿ ಅವರ ಭೇಟಿ ಮತ್ತು ಅವರೊಂದಿಗಿನ ಸಂವಾದ ಅಭ್ಯರ್ಥಿಗಳಿಗೆ ದೊರೆತ ಅಧಿಕ ಲಾಭ ಮತ್ತು ಬಯಸದೇ ಬಂದ ಭಾಗ್ಯ. ಶ್ರೀ ಕೃಪಾಕರ - ಸೇನಾನಿಯವರು ಅವರ ಛಾಯಾಗ್ರಹಣದ ಅನುಭವಗಳನ್ನು ಅಭ್ಯರ್ಥಿಗಳೊಂದಿಗೆ ಹಂಚಿಕೊಂಡರು, ಜೊತೆಗೆ ಮಾರ್ಗದರ್ಶನವನ್ನೂ ನೀಡಿದರು. ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ನಮ್ಮೊಡನೆ ಬೆರೆತು, ಊಟ ಮಾಡಿ, ಶಿಬಿರದ ಭಾಗವಾಗಿ ಅವರು ಕಳೆದ ಸಮಯ ನಿಜಕ್ಕೂ ಸ್ಮರಣೀಯ.

ಶ್ರೀ ತಿಪ್ಪೆಸ್ವಾಮಿಯವರು ಕರ್ನಾಟಕದ ಹಿರಿಯ ಛಾಯಾಗ್ರಾಹಕರಲ್ಲಿ ಹಿರಿಯರು. ರಾಷ್ಟ - ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದವರು. ಛಾಯಾಗ್ರಹಣದಲ್ಲಿ ಅತ್ಯುನ್ನತ ಪ್ರಶಸ್ತಿ - ಪುರಸ್ಕಾರಗಳನ್ನು ತಮ್ಮದಾಗಿಸಿಕೊಂಡವರು. ಶ್ರೀಯುತರು ತಮ್ಮ 5 ದಶಕಗಳ ಛಾಯಾಚಿತ್ರ ಅನುಭವದಲ್ಲಿ ಸಂಪಾದಿಸಿದ ಅವಿಸ್ಮರಣೀಯ ಘಟನೆಗಳನ್ನು ನಮ್ಮೊಂದಿಗೆ ಹಂಚಿಕೊಂಡರು, ಮತ್ತು ಅವರು ಸಾಗಿಬಂದ ಹಾದಿಯ ಪರಿಚಯ ಮಾಡಿಕೊಟ್ಟರು. ಈ 5 ದಶಕದಲ್ಲಿ ಛಾಯಾಗ್ರಹಣದಲ್ಲಿ ಆಗಿರುವ ಬದಲಾವಣೆಯ ಕಡೆ ಬೆಳಕು ಚೆಲ್ಲಿದರು.

ಛಾಯಾಗ್ರಹಣದಲ್ಲಿ ಪಡೆಯುವ "ಫೆಲೋಶಿಪ್" ಗಳು, ಪದವಿಗಳ ಹಾದಿಯ ಕಿರು ಪರಿಚಯ ಮತ್ತು ಅದರ ಹಿಂದಿನ ಶ್ರಮವನ್ನು ಶಿಬಿರಾರ್ಥಿಗಳಿಗೆ ತಿಳಿಸಿದರು. ಜೊತೆಗೆ ಅವರು ಕ್ಲಿಕ್ಕಿಸಿದ ಅದ್ಬುತ ಚಿತ್ರಗಳನ್ನು ಪ್ರದರ್ಶಿಸಿ ವಿಶ್ಲೇಷಿಸಿದರು.

ಇನ್ನು ಮನು ಕೆ. ರವರು ನಮ್ಮ ಕಾರ್ಯಗಾರದಲ್ಲಿ ಸಕ್ರಿಯವಾಗಿ ತೊಡಗಿ ಕಾರ್ಯಾಗಾರದ ಯಶಸ್ವಿಗೆ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅಭ್ಯರ್ಥಿಗಳೊಂದಿಗೆ ಛಾಯಾಗ್ರಹಣ ಮತ್ತು ಅದರ ಹೊರತಾಗಿ ಛಾಯಾಗ್ರಾಹಕನ ಸಾಮಾಜಿಕ ಜವಾಬ್ದಾರಿಗಳ ಕಡೆ ಬೆಳಕು ಚೆಲ್ಲಿದರು.

ಮನುರವರು ಪೆಲಿಕನ್ ಮನು ಎಂದೇ ಚಿರಪರಿಚಿತ. ಕೊಕ್ಕರೆ ಬೆಳ್ಳೂರಿನಲ್ಲಿ ಪೆಲಿಕನ್ ಗಳ ಉಳಿವಿಗಾಗಿ ಮನುರವರು ಮಾಡುತ್ತಿರುವ ಕೆಲಸ ಪ್ರಶಂಸನೀಯ. ಪರಿಸರ, ಪಕ್ಷಿ, ಮಕ್ಕಳು ಮತ್ತು ತರಬೇತಿ ಇವರ ಬದುಕು. ರಾಷ್ಟ್ರ - ಅಂತರಾಷ್ಟ್ರ ಮಟ್ಟದಲ್ಲಿ ಹಲವು ಪ್ರಶಸ್ತಿ - ಪುರಸ್ಕಾರಗಳು ಇವರ ಪಾಲಾಗಿದೆ. ಇಂಥವರು ನಮ್ಮೊಂದಿಗೆ ಕಳೆದ ಎರಡು ದಿನ ನಿಜಕ್ಕೂ ಅಮೂಲ್ಯ.

ಲೋಕೇಶ್ ಮೊಸಳೆಯವರು , ಶ್ರೀ ಎಸ್ ತಿಪ್ಪೆಸ್ವಾಮಿಯವರು ಕಾರ್ಯಾಗಾರದ ಕೊನೆಯ ಭಾಗದಲ್ಲಿ.
ಇಷ್ಟೆಲ್ಲಾ ಚಟುವಟಿಗಳ ನಡುವೆ ಬೆಳಗಿನ ಜಾವಕ್ಕೆ ಹೊರಟು ಎಲ್ಲಾ ಅಭ್ಯರ್ಥಿಗಳು ಕೆಮೆರಾ ಹಿಡಿದು ಪ್ರಾಯೋಗಿಕ ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತರಬೇತಿಯನ್ನು ಅರ್ಥಪೂರ್ಣವಾಗಿ ಮುಗಿಸಿದರು.

ಅಭ್ಯರ್ಥಿಗಳು ಪ್ರಾಯೋಗಿಕ ಛಾಯಾಗ್ರಹಣ ತರಬೇತಿಯಲ್ಲಿ ತೊಡಗಿರುವುದು.
ಈ ಶಿಬಿರ, ಅಭ್ಯರ್ಥಿಗಳಿಗೆ ನಿಜಕ್ಕೂ ಪ್ರಯೋಜನಕಾರಿಯಾಗಿದೆ ಎಂದು ಭಾವಿಸುತ್ತೇವೆ. ಅವರ ಚಿತ್ರದಲ್ಲಿನ ಬದಲಾವಣೆ ಮುಂದೆ ಖಂಡಿತವಾಗಿಯೂ ಕಾಣುತ್ತದೆ ಎಂಬ ವಿಶ್ವಾಸ ನಮಗಿದೆ.

ಕಾರ್ಯಾಗಾರದ ಕೊನೆಯಲ್ಲಿ ಅಭ್ಯರ್ಥಿಗಳೊಂದಿಗೆ ಶ್ರೀ ಕೃಪಾಕರ - ಸೇನಾನಿ ಯವರು, ಲೋಕೇಶ್ ಮೊಸಳೆಯವರು ಮತ್ತು ಮನು ಕೆ ರವರು.
ಶಿಬಿರದ ನಂತರ ಅಭ್ಯರ್ಥಿಗಳು ನೀಡಿದ ಪ್ರತಿಕ್ರಿಯೆಯನ್ನು ಇಲ್ಲಿ ಉಲ್ಲೇಖಿಸಲಾಗಿದೆ.

Aravind Pai
Well organized, Good Venue.
Well known, experience photographer participation is icing on the cake.
If some basic pre-read could be sent by email prior to workshop.
Good Practical Session & feedback received by Participants.

Manu G. R.
I enjoyed and learnt a lot in this workshop & next workshop i want attend. Please inform.

Siddalingeshwara T Durgad
ಸ್ಥಿರ ಛಾಯಾಗ್ರಹಣ ಕುರಿತಾದ  ಈ ಎರಡು ದಿನಗಳ ಕಾರ್ಯಗಾರ ಹೇಗಿರುತ್ತದೆಂಬ ಯಾವುದೇ ಪೂರ್ವಾನುಭವ ಇರಲಿಲ್ಲ. ಕಾರ್ಯಗಾರದಲ್ಲಿ ಅಸಂಖ್ಯ ವಿಷಯಗಳು ಹಂಚಿಕೊಳ್ಳಲು ದೊರೆತಿವೆಯೆಂದರೆ, ಈ ಕಾರ್ಯಗಾರವನ್ನು ಆಲೋಚಿಸಿ, ಆಯೋಜಿಸಿ ನಿರೂಪಿಸಿದ ಈ ತಂಡದ ಹಿಂದಿನ ಕಾಳಜಿಯೇ ಅದಕ್ಕೆ ಕಾರಣ ಎಂದು ನನ್ನ ಅನಿಸಿಕೆ.

ಸಾಕಷ್ಟು ಅಂಶಗಳನ್ನು ಮನನ ಮಾಡಿಕೊಂಡು ಸಂಜೆ ಹಾಗೂ ಇಂದು ಮುಂಜಾನೆ ಪ್ರಾಯೋಗಿಕವಾಗಿ ಕ್ಲಿಕ್ಕಿಸಿ ನೋಡಿದಾಗ ದೃಷ್ಟಿಕೋನದೊಂದಿಗೆ ಚಿತ್ರದ ಒಟ್ಟಾರೆ ಗುಣಮಟ್ಟದಲ್ಲಿ ತಕ್ಷಣ ಸುಧಾರಣೆ ಗೋಚರಿಸಿತು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

Srinivas V
A very well organized program. The practical sessions was very helpful in understanding to use the camera better. The organizers mingled well with participants and helped to learn the photography techniques very well.

External guest invitees added a special aura to the program. The invitees were really extraordinary and whom i would not have met during my lifetime.


Ashok
Event should have organized still more methodically. Time maintenance was kept up. More of Photographic language should have been used. More of Kannada Words was used was not to the expected level. Next organization - keeping in mind time as well as more of presentation.


Abhilash M. U.
I knew some of the basic things before. But Gowreesh Sir's explanation about composition has helped me a lot. We would like to have the next class that is continued version of this workshop.

Tripuranthaka G. L
ಶ್ರೀ ಲೋಕೇಶ್ ಹಾಗೂ ಶ್ರೀ ಗೌರೀಶ್ ರವರ ತರಗತಿಯೋಳಗಿನ, ಹೊರಗಿನ ಮಾರ್ಗದರ್ಶನ ಉಪಯುಕ್ತವಾಗಿತ್ತು. ಪಕ್ಷಿಗಳ ಬಗ್ಗೆ ಆಸಕ್ತಿ ಕೆರಳಿಸಿದ ಶ್ರೀ ಪೆಲಿಕಾನ್ ಮನು ರವರಿಗೆ ವಿಶೇಷ ಧನ್ಯವಾದಗಳು.

Harshad Uday Kamath
Practical session was very good, as Lokesh sir individually came to us and taught us how to capture. Thanks for the technical session by Gowreesh sir.

I hope the next workshop will be conducted soon. I am going to practice which i have learnt here. Thank you to Lokesh Sir, Gowreesh Sir, Manu Sir and all participants for making workshop very memorable.

Ullas
ಈ ಕಾರ್ಯಗಾರದಿಂದ ನನಗೆ ಛಾಯಾಗ್ರಹಣದಲ್ಲಿ ಬಹಳಷ್ಟು ಜ್ಞಾನ ಹೆಚ್ಚಾಗಿದೆ. ಈ ರೀತಿಯಲ್ಲೇ ಮತ್ತಷ್ಟು ಕಾರ್ಯಾಗಾರಗಳನ್ನು ಮಾಡುವುದರಿಂದ ನನ್ನಂಥ ಯುವ ಛಾಯಾಗ್ರಾಹಕರಿಗೆ ತುಂಬಾ ಉಪಯುಕ್ತವಾಗುವುದು.

Praveen Krishna P. S.
I was too much amazed by the art of photography and it was the 1st workshop, so my expectation was really high and i am very happy for the way workshop progressed.

I am looking forward to learn more from you people whenever i get the opportunity. Special thanks to Manu Sir.

Shishir G
The class was very knowledgeable. we had lots of fun. definitely a new experience.

Sundaresh B. V.
During the event we could able to learn basics of photography. I personally feel more time would have dedicated to practical session by which participants may learn more about settings and composition.

I wish to attend more workshops like what we have attended now.

K. Sundar Raj
We respect your hard work and honest of photography workshop. We need more workshops like this. Please try to conduct more advance of photography. Always we are here to help to you and your team.

Athul

The workshop was very good. It has helped us to improve our skills, and also given a new path on how to look at images or rather bring in our creativity in it.

The workshop gave us the knowledge which we lacked. The most wonderful aspect about the workshop was the on field training, which really matters. The workshop topics were well planned for beginners like us. Thank you for conducting this workshop and also would like to attend future workshops.

Devaraj
Thank you again for conducting this workshop. Hope to attend more workshops in the future.

ಮುಂದಿನ ನಮ್ಮ ಕಾರ್ಯಾಗಾರಗಳು ಇನ್ನಷ್ಟು ಸುಧಾರಿತ ಅವ್ರುತ್ತಿಗಳಾಗಿ ಬೆಳೆಯುತ್ತವೆ ಹಾಗೂ ಈ ನಮ್ಮ ಬಳಗ ಮುಂದೆ ದೊಡ್ಡದಾಗುತ್ತಾ ಹೋಗುವುದೆಂದು ಆಶಿಸುತ್ತೇವೆ.

ಲೋಕೇಶ್ ಮೊಸಳೆ
ಗೌರೀಶ್ ಕಪನಿ


No comments:

Post a Comment