ಅಂದು ಬೆಳಗ್ಗೆ ಎಂದಿನಂತೆ ಕಛೇರಿಗೆ ಬಂದು ಕೆಲಸ ಪ್ರಾರಂಭಿಸುವ ಮುನ್ನ ನನ್ನ e-ಮಿಂಚೆ ತೆರೆದೆ. ಗೆಳೆಯ ಬಸವರಾಜುವಿನ "ಒಂದು ಸಣ್ಣ ವಿನಂತಿ" ಎಂಬ ಶೀರ್ಷಿಕೆಯ ಮಿಂಚೆ ಬಂದು ನನ್ನ inbox ನಲ್ಲಿ ಕುಳಿತಿತ್ತು. ಯಾವಾಗಲು ವಿಶಿಷ್ಟ ಮಿಂಚೆಗಳು ಮತ್ತು ಚರ್ಚೆಗಳನ್ನು ಕುಳುಹಿಸುವ ಗೆಳೆಯನ ಪತ್ರದಲ್ಲಿ ಏನಾದರು ಹೊಸತನ್ನು ನಿರೀಕ್ಷಿಸುತ್ತಾ ಪತ್ರ ತೆರೆಯಲು ಕ್ಲಿಕ್ ಮಾಡಿದೆ.
ಈ ಬಾರಿ ಗೆಳೆಯರಾದ ಬಸವರಾಜು ಮತ್ತು ಭರತ್ ಒಂದು ಗಂಭೀರ ವಿಷಯದ ಬಗ್ಗೆ ಚರ್ಚೆ ಪ್ರಾರಂಬಿಸಿದ್ದರು. ಈ ಸಲ ರಾಜ್ಯೋತ್ಸವಕ್ಕೆ ನಮ್ಮ ಕಲಾವಿದ ಸ್ನೇಹಿತ ಬಳಗದಿಂದ ಏನಾದರೂ ವಿಶೇಷ ಚಟುವಟಿಕೆ ನೆಡೆಸಲು ಯೋಚಿಸಿ ಪ್ರಸಕ್ತ ಕರ್ನಾಟಕ, ಕನ್ನಡಕ್ಕೆ ಸಂಭಂದಿಸಿದ ಬಗ್ಗೆ ಬಳಗದ ಸ್ನೇಹಿತರೆಲ್ಲರೂ ವಿನ್ಯಾಸಮಾಡಿ ಅದರಲ್ಲಿ ಒಂದು ವಿನ್ಯಾಸವನ್ನು ಆಯ್ಕೆಮಾಡಿ ಅದನ್ನು T-Shirt ಮೇಲೆ ಮುದ್ರಿಸಿ ರಾಜ್ಯೋತ್ಸವಕ್ಕೆ ಬಳಗದ ಸ್ನೇಹಿತರು ಧರಿಸಬೇಕೆಂದು ಇತ್ತು. ಈ ಕಾರ್ಯಕ್ರಮಕ್ಕೆ ಬಳಗದ ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ಬಂತು. ಕೊನೆಯದಾಗಿ 20 ವಿನ್ಯಾಸಗಳು ಸಿದ್ದಗೊಂಡು ನಂತರ ಗೆಳೆಯ ರಾಜೇಶ್ ಆಚಾರ್ಯರವರ ವಿನ್ಯಾಸ ಮೆಚ್ಚುಗೆ ಪಡೆದು ಎಲ್ಲರ ಆಯ್ಕೆಗೆ ಪಾತ್ರವಾಯಿತು.
ಈ ನಮ್ಮ ಚಟುವಟಿಕೆಯಿಂದ ಸ್ಪೂರ್ತಿಗೊಂಡ ನಾನು ಕಛೇರಿಯಲ್ಲಿ ಸಹೋದ್ಯೋಗಿಗಳಿಗೆ ತಿಳಿಸಿದೆ. ಅವರು ಆಸಕ್ತಿ ತೋರಿಸಿದ್ದು ನನ್ನ ಉತ್ಸಾಹಕ್ಕೆ ಗರಿ ಮೂಡಿತು. ಯಾರಿಗೂ ಬಲವಂತ ಮಾಡದೆ, ಆಸಕ್ತಿ ಇರುವವರು ಸ್ವಯಂ ಪಾಲ್ಗೊಳ್ಳುವಂತೆ ಆಹ್ವಾನವಿತ್ತೆವು. ನಿರೀಕ್ಷೆಗೂ ಮೀರಿ ಪ್ರತಿಕ್ರಿಯಿಸಿದ ಗೆಳೆಯರು ನನ್ನಲ್ಲಿ ಅಚ್ಚರಿ ಮೂಡಿಸಿತು. ಕನ್ನಡ ಬಾರದ ಹೊರರಾಜ್ಯದ ಸಹೋದ್ಯೋಗಿಗಳೂ ಕೂಡ ಖುಷಿಯಿಂದ ಪಾಲ್ಗೊಂಡರು, ಸಂಭ್ರಮಿಸಿದರು. IT ಯಲ್ಲಿ ಕನ್ನಡದ ಶುಭ್ರ ಮಲ್ಲಿಗೆಯ ಕಂಪು ಬೀರುತ್ತಿತ್ತು. ನವೆಂಬರ್ 2 ರಂದು ಎಲ್ಲರೂ T-Shirt ಧರಿಸಿ ಸಂಭ್ರಮಿಸಿ, ಒಗ್ಗಟ್ಟು ಸಾರಿದೆವು. ಕನ್ನಡ ಬಾರದ ಸ್ನೇಹಿತರಿಗೆ ಕನ್ನಡ ಕಲಿಸುವ ಪಣತೊಟ್ಟೆವು.
ನಮ್ಮ ಈ ಚಟುವಟಿಕೆ ಸಣ್ಣದಾಗಿ ಕಂಡರೂ ಪ್ರಸಕ್ತ ಮಾಹಿತಿ ತಂತ್ರಜ್ನಾನ ಕ್ಷೇತ್ರದಲ್ಲಿ ಇಂಥ ಸಣ್ಣ ಸಣ್ಣ ಚಟುವಟಿಕೆಗಳು ನಮ್ಮ ಇರುವಿಕೆಯನ್ನು ಪ್ರತಿಪಾದಿಸುತ್ತವೆ ಮತ್ತು ಕನ್ನಡೇತರರಲ್ಲಿ ಕನ್ನಡದ ಬಗ್ಗೆ ಒಂದು ಸಣ್ಣ ಆಸಕ್ತಿ, ಒಲವು ಮತ್ತು ಗೌರವಕ್ಕೆ ಖಂಡಿತಾ ಪ್ರೇರಣೆಯಾಗುತ್ತದೆ ಎಂದು ನಂಬಿದ್ದೇನೆ.
ಗೆಳಯ ಭರತ್ ರವರಿಗೆ ಸುಮಾರು 100ಕ್ಕೂ ಹೆಚ್ಚು ಕರೆಗಳು ಹಾಗೂ 50ಕ್ಕೂ ಹೆಚ್ಚು ಮಿಂಚೆಗಳು ಪ್ರಶಂಸೆಯ ಮಾತುಗಳು ಹಾಗೂ ವಿನ್ಯಾಸಗಳಿಗಾಗಿ, T-shirt ಗಳಿಗಾಗಿ ವಿಚಾರಣೆಗಳು ಬಂದಿವೆಯಂತೆ!! ITಯಲ್ಲಿ ಕನ್ನಡಕ್ಕೆ ಗೌರವವಿಲ್ಲ, ಸ್ಥಾನವಿಲ್ಲ ಎಂದು ಮೈಕುಗಳ ಮುಂದೆ ಬಡಾಯಿಬಿಡುವ ಭಾಷಣ ಪ್ರಿಯರಿಗೆ ಮುಂದೆ ಮಾತನಾಡಲು ಮೈಕು ಸಿಗುವುದಿಲ್ಲ. ITಯಲ್ಲೂ ಕನ್ನಡ ದೀಪ ಬೆಳಗುತ್ತಿದೆ... ಬೆಳಗುತ್ತಿರುತ್ತದೆ...
ಈ ಚಟುವಟಿಕೆಗೆ ಪ್ರೇರಣೆಯಾದ ಹಾಗೂ ಪಾಲ್ಗೊಂಡ ಎಲ್ಲಾ ಬಳಗದ ಸ್ನೇಹಿತರಿಗೆ ಧನ್ಯವಾದಗಳು.
ನಮ್ಮ ಕಲಾವಿದ ಬಳಗದಿಂದ ರಚಿಸಿದ ವಿನ್ಯಾಸಗಳು ಈ ಲಿಂಕ್ ನಲ್ಲಿ ವೀಕ್ಷಿಸಲು ಲಭ್ಯ. http://picasaweb.google.com/rajuyelbee/Naadu_nudi/
- ಸಾಮಾನ್ಯ
No comments:
Post a Comment