ಈ ಭೂಮಿ ಯಾಕಿಷ್ಟು ಸುಂದರ? ಕಾಡು, ಹೂವು, ನದಿ, ಸಮುದ್ರ ಕೆರೆ-ತೊರೆ, ಪ್ರಾಣಿ, ಕೀಟ, ಸಸ್ಯ ಸಂಕುಲ, ಗಾಳಿ, ಬೆಳಕು ಈಗೆ ಹತ್ತು ಹಲವು ಈ ಭೂಮಿಯ ಸೌಂದರ್ಯವನ್ನು ವೃದ್ದಿಸಿವೆ! ಈ ಭೂಮಿಯ ಸೌಂದರ್ಯಕ್ಕೆ ಭಾನು ವಿಶಿಷ್ಟ ಬಣ್ಣಗಳ ಹಿನ್ನೆಲೆಕೊಟ್ಟು ಧರಿತ್ರಿಯಸೌಂದರ್ಯ ದ್ವಿಗುಣವಾಗುವಂತೆ ಮಾಡುತ್ತದೆ. ಭೂಮಿ ಮತ್ತು ಭಾನುವನ್ನು ಯಾವುದು ಬೆಸೆಯುತ್ತದೆ; ಜೀವಂತಿಕೆಯನ್ನು ತುಂಬುತ್ತದೆ? "ಮೋಡ-ಮಳೆ". ತೇಲುವ ಮೋಡ, ಕಾರ್ಮೊಡಗಳಾಗಿ ಮಳೆಯಾಗಿ ಭುವಿಯನ್ನು ತೊಯ್ದು ತಂಪೆರೆದು ಸಕಲ ಜೀವಕೊಟಿಗೆ ಆಧಾರವಾಗುತ್ತದೆ. ಈ ಪ್ರಕ್ರಿಯೆಯೇ ಒಂದು ಸೊಬಗು. ಈ ಎಲ್ಲಾ ಹಂತಗಳಲ್ಲೂ ಭೂಮಿಯ ಸೌಂದರ್ಯ ಬದಲಾಗುತ್ತಾ ಪ್ರತಿ ಹಂತದಲ್ಲೂ ಒಂದಾನೊಂದು ರೀತಿಯ ಸೌಂದರ್ಯ, ಸೊಬಗು - ಬೆರಗುಗಳನ್ನು ತುಂಬಿಕೊಡುತ್ತಾ ಈ ಕ್ರಿಯೆ ನಿರಂತರವಾಗಿ ಸಾಗುತ್ತಿರುತ್ತದೆ.ಇಷ್ಟಾದರೂ ಏನೋ ಒಂದು ಅಪೂರ್ಣತೆ ಕಾಡುತ್ತಿದೆ! ಇನ್ನೇನು ಒಂದು ಈ ಭೂಮಿ - ಭಾನುವಿನ ಒಡನಾಟದಲ್ಲಿ ಸೌಂದರ್ಯದಲ್ಲಿ ಪ್ರಮುಖರೂವಾರಿಯನ್ನು ಮರೆತಿದ್ದೇವೆ ಅಲ್ಲವೇ? ಪರಿಸರಕ್ಕೆ ಭಾನಿಗೆ ಜೀವತುಂಬುವವರು, ಯಾರಿವರು?
ಇವರೇ "ಪಕ್ಷಿ ಸಂಕುಲ"
ಭೂಮಿ - ಭಾನುವನ್ನು ಬೆಸೆಯುವವರು, ಕಾಡಿಗೆ ನಾಡಿಗೆ ಹಾಗೂ ಭಾಣಿಗೆ ದಾನಿಯಾಗುವವರು. ಹಕ್ಕಿಗಳೇ ಇಲ್ಲದ ಭಾನನ್ನು ಕಲ್ಪಿಸಿಕೊಂಡರೆಹಕ್ಕಿಗಳ ಕಲರವವೇ ಇಲ್ಲದ ಕಾಡು-ಪರಿಸರವನ್ನು ಕಲ್ಪಿಸಿಕೊಂಡರೆ ನಿಜಕ್ಕೂ ಒಂದು ಕ್ಷಣಕೂಡ ಇಷ್ಟವಾಗುವುದಿಲ್ಲ. ದಿನ ನಿತ್ಯದ ನಮ್ಮಬದುಕಿನಲ್ಲಿ ಸಂಸ್ಕೃತಿಯಲ್ಲಿ ಪರಂಪರೆಯಲ್ಲಿ ಮತ್ತು ಪರಿಸರದಲ್ಲಿ ಬೆರೆತು ಹೋಗಿರುವ ಈ ಪಕ್ಷಿಗಳನ್ನು ನಾವೆಷ್ಟು ಅರಿತಿದ್ದೇವೆ? ಪಕ್ಷಿಗಳದನಿಯಷ್ಟೇ ಅವುಗಳ ಬದುಕು ಕೂಡ ಚೆಂದ.
ಪಕ್ಷಿಗಳ ವಿಶೇಷತೆ:
ಪಕ್ಷಿಗಳ ಪ್ರಮುಖ ವಿಶೇಷತೆ ಎಂದರೆ ಪುಕ್ಕಗಳು, ಬೇರೆ ಯಾವುದೇ ಜೀವ ಸಂಕುಲಕ್ಕೆ ಇರದ, ಹಾರಲು ಸಂಪೂರ್ಣ ಸಹಾಯಕವಾಗುವಂಥವಿಶೇಷ ಪುಕ್ಕಗಳು. ಒಂದೊಂದು ಪ್ರಭೇದದ ಹಕ್ಕಿಗೂ ಗಾತ್ರಕ್ಕೆ ತಕ್ಕಂತೆ ಪುಕ್ಕಗಳು ರಚನೆಯಾಗಿದೆ. ಪ್ರತಿ ಪ್ರಬೇದದ ಹಕ್ಕಿಗೂ ಅದರದೇವಿಶೇಷ ಬಣ್ಣಗಳು, ಹೊಳಪು - ವೈಯಾರಗಳು ಇವೆ. ಹಕ್ಕಿಗಳು ತಮ್ಮ ದ್ವನಿಯಿಂದಲೂ ನಮ್ಮನ್ನು ಆಕರ್ಷಿಸುತ್ತವೆ. ಪ್ರತಿ ಹಕ್ಕಿಗೂ ಅದರದೇಆದ ಮಧುರ ದ್ವನಿ ಇದೆ. ಕಾಲಗರ್ಭದಲ್ಲಿ ಪಕ್ಷಿಗಳಿಗೆ ೧೫೦ ದಶಲಕ್ಷ ವರ್ಷಗಳ ಇತಿಹಾಸವಿದೆ. ಮೂಲಗಳ ಪ್ರಕಾರ ಸರಿಸೃಪಗಳಿಂದಕವಲೊಡೆದು ಉರಗ ಮೂಲದಿಂದ ಕಾಲಾಂತರದಲ್ಲಿ ಪಕ್ಷಿಗಳಾಗಿದೆ ಎಂದು ನಂಬಲಾಗಿದೆ.
ಪ್ರಪಂಚದಲ್ಲಿ ಸುಮಾರು ೮೬೦೦ ಕ್ಕೊ ಹೆಚ್ಚು ಪಕ್ಷಿ ಪ್ರಭೇದಗಳಿವೆ. ಇವುಗಳಲ್ಲಿ ಸುಮಾರು ೧೨೦೦ ಕ್ಕೊ ಹೆಚ್ಚು ನಮ್ಮ ದೇಶದಲ್ಲಿದೆ.ಸುಮಾರು ೫೨೨ ವಿವಿಧ ಪಕ್ಶಿಗಳನ್ನು ನಮ್ಮ ರಾಜ್ಯದಲ್ಲಿ ಗುರುತಿಸಲಾಗಿದೆ. ಸಾಮಾನ್ಯವಾಗಿ ಪಕ್ಶಿಗಳನ್ನು ನಾಲ್ಕು ವಿಧಗಳಾಗಿವಿಂಗಡಿಸಬಹುದು. ೧. ನೀರಿನ ಪಕ್ಶಿಗಳು, ೨. ಹಿಂಸ್ರಾ ಪಕ್ಷಿಗಳು ೩. ಗಿಡ, ಮರ, ಮತ್ತು ಬಳ್ಳಿಗಳನ್ನು ಅವಲಂಬಿಸಿರುವ ಪಕ್ಷಿಗಳು ಹಾಗೂ ೪.ಹಾರಲಾರದ ಪಕ್ಷಿಗಳು.
ನೀರಿನ ಪಕ್ಷಿಗಳನ್ನು ಸಾಮಾನ್ಯವಾಗಿ ಕೆರೆ, ಹೊಳೆ, ನದಿ, ಸಮುದ್ರದ ದಡಗಳಲ್ಲಿ ಹುಳುಗಳಿಗೆ, ಮೀನುಗಳಿಗೆ ಹೆಕ್ಕುತ್ತಾ ಕಾಲಕಳೆಯುತ್ತವೆ. ಈಗುಂಪಿಗೆ ಕೊಕ್ಕರೆಗಳು, ಮಿಂಚುಳ್ಲಿಗಳು, ಹೊಳೆ ವಿಹಾರಿ, ನೀರುಕಾಗೆ ಈಗೆ ಹತ್ತು ಹಲವು. ಇದರಲ್ಲಿ ಇನ್ನೂ ಒಂದು ಗುಂಪಿದೆ. ನೀರಿನಲ್ಲಿತೇಲುತ್ತಾ ಈಜುತ್ತಾ, ನೀರಿನ ಎಲೆಗಳ ಮೇಲೆ ನೆಡೆದಾಡುತ್ತಾ ಮೊಟ್ಟೆ ಇಟ್ಟು ಮರಿ ಮಾಡಿ ನೀರಿನ ಜೌಗುಗಳಲ್ಲೇ ವಾಸಿಸುವಂಥವು.ಉದಾಹರಣೆಗೆ: ಬಾತು ಕೋಳಿಗಳು, ನಾಮದ ಹಕ್ಕಿಗಳು, ಅರಿಶಿನ ಕತ್ತು, ದೇವನಹಕ್ಕಿ, ಮೆಟ್ಟುಗೋಲು ಪಕ್ಶಿಗಳು ಮುಂತಾದವು.
ಈ ಹಕ್ಕಿಗಳನ್ನು ನಿಮ್ಮೋರಿನ ಕೆರೆಗಳ ದಡದಲ್ಲಿ ಅಡ್ಡಾಡಿದರೆ ನಿಮ್ಮ ಕಣ್ಣಿಗೆ ಸುಲಭವಾಗಿ ಕಾಣಸಿಗುತ್ತವೆ. ಹತ್ತಿರ ಹೋದಿರೋ ಕೆರೆಯಇನ್ನೊಂದು ದಡಕ್ಕೆ ಅಥವಾ ಕೆರೆಯ ಮಧ್ಯಕ್ಕೋ ಹೋಗಿಬಿಡುತ್ತವೆ. ದಡದ ಒಂದು ಭಾಗದಲ್ಲಿ ತಣ್ಣಗೆ ಕುಳಿತು ನಿಶ್ಯಬ್ದವಾಗಿ ಅವುಗಳ ಕಲರವಗಮನಿಸುತ್ತಾ ತಾಳ್ಮೆಯಿಂದ ಕೂತರಷ್ಟೇ ಅವುಗಳ ಸೌಂದರ್ಯ ಸವಿಯಲು ಸಾದ್ಯ.
ನೀರಿನ ಪಕ್ಷಿಗಳ ಕೊಕ್ಕು, ಕಾಲು ಮತ್ತು ಕಾಲು ಬೆರಳುಗಳಲ್ಲಿ ವಿಶೇಷತೆ ಇದ್ದು ಅಂಥಾ ಪರಿಸರಕ್ಕೆ ಪೂರಕವಾಗಿ ವಿನ್ಯಾಸಗೊಂಡಿರುತ್ತದೆ.ಸಾಮಾನ್ಯವಾಗಿ ನೀರಿನ ಪಕ್ಶಿಗಳು ನೀರಿನ ತುಸು ಆಳಕ್ಕೆ ಇಳಿದು ಆಹಾರ ಹುಡುಕುವ ಹಕ್ಕಿಗಳು ಗಾತ್ರದಲ್ಲಿ ಸ್ವಲ್ಪ ದೊಡ್ಡವಿದ್ದು ಕಾಲುಗಳುಉದ್ದ ಮತ್ತು ಕೊಕ್ಕು ಉದ್ದ - ದಪ್ಪದಿಂದ ವಿನ್ಯಾಸಗೊಂಡಿರುತ್ತದೆ. ಅದೇ ನೀರಿನಲ್ಲೇ ಈಜಾಡುತ್ತಾ ಜೌಗುಗಳಲ್ಲಿ ವಾಸಿಸುವ ಹಕ್ಕಿಗಳಿಗೆಕಾಲಿನ ಬೆರಳುಗಳ ಸಂದುಗಳಲ್ಲಿ ತೆಳುವಾದ ಚರ್ಮ ಪೊರೆಗಳಂತಿದ್ದು ಈಜಲು ಅನುವುಮಾಡಿಕೊಡುತ್ತದೆ. ಗಿಡ್ಡ ಕಾಲು ಚಪ್ಪಟೆ ಕೊಕ್ಕು ಈಗೆಅದರ ಜೀವನ ಪದ್ದತಿಗೆ ತಕ್ಕಂತೆ ರಚಿತವಾಗಿರುತ್ತದೆ. ಇನ್ನು ನೀರಿನಲ್ಲಿ ಎಲೆಗಳ ಮೇಲೆ ನಡೆದಾಡುವ ಹಕ್ಕಿಗಳ ಕಾಲಿನ ಬೆರಳುಗಳು ಉದ್ದಅಗಳದಿಂದ ಇರುತ್ತದೆ. ಇದರ ಸಹಾಯದಿಂದ ಸುಲಭವಾಗಿ ನದೆದಾದುತ್ತದೆ. ಪ್ರತಿ ಹಕ್ಕಿಗೂ ಅದರದೇ ಆದ ದೇಹ ವೈಶಿಷ್ಟ್ಯತೆಗಳು ಇದೆ.ಅವರವರ ಜೀವನ ಪದ್ದತಿಗೆ ಮಾರ್ಪಾಟಾಗಿವೆ ಜೊತೆಗೆ ಅದರ ದೈಹಿಕ ವಿನ್ಯಾಸಕ್ಕೆ ತಕ್ಕಂತೆ ಜೀವನ ಪದ್ದತಿಯನ್ನೂ ಹೊಂದಿದೆ.
ಹಿಂಸ್ರಾ ಪಕ್ಷಿಗಳು ಸಾಮಾನ್ಯವಾಗಿ ಮರಗಳ, ಕಟ್ಟಡದ, ಲೈಟು ಕಂಬಗಳ ಅಥವಾ ಎತ್ತರದ ಪ್ರದೇಶಗಳಲ್ಲಿ ಕೂತು ವಿಶ್ರಮಿಸುತಿರುತ್ತವೆ.ಊರಾಚೆಯ ಕೊಳಚೆಯ ಬಳಿ, ಸತ್ತ ಪ್ರಾಣಿಯ ಬಳಿ, ಒಣಗಿರುವ ಕೆರೆಗಳಲ್ಲಿ ಬಯಲು ಪ್ರದೇಶಗಳಲ್ಲಿ ಇವು ಕಾಣಸಿಗುತ್ತವೆ. ಊರುಗಳಲ್ಲಿಕಟುಕರ ಅಂಗಡಿಯ ಸುತ್ತಾಮುತ್ತಾ ಕಾಣಸಿಗುತ್ತವೆ. ನಿಮ್ಮ ಮನೆಯಲ್ಲಿ ಕೋಳಿಮರಿಗಳು ಇದ್ದಾರಂತೂ ಒಂದು ಕ್ಷಣ ಕಣ್ತಪ್ಪಿದರೂಹಾರಿಸಿಕೊಂಡು ಹೂಗಿಬಿಡುತ್ತವೆ. ಕರಾವಳಿ ಭಾಗದಲ್ಲಿ ಸಮುದ್ರಕ್ಕೆ ಹೊಂದಿಕೊಂಡ ವಿಶೇಷ ಹಿಂಸ್ರಾ ಪಕ್ಶಿಗಳ ಗುಂಪು ಕೂಡ ಇದೆ.ಉದಾಹರಣೆಗೆ: ಹದ್ದುಗಳು, ಗರುಡ, ಜೌಗು ಸೆಳೆವ, ಡೇಗೆ, ಗಿಡುಗ, ಮುಂತಾದವು.
ಹಿಂಸ್ರಾ ಪಕ್ಶಿಗಳಲ್ಲಿ ಇನ್ನೊಂದು ಗುಂಪು ಬರೀ ಸತ್ತ ಪ್ರಾಣಿಗಳನ್ನಷ್ಟೇ ತಿನ್ನುತ್ತವೆ. ಈ ಗುಂಪಿನ ಹಕ್ಕಿಗಳು ಸಾಮಾನ್ಯವಾಗಿ ಊರಿನ ಆಚೆಸ್ಮಶಾನದಲ್ಲಿ, ಕಾಡಿನಲ್ಲಿ, ಸತ್ತ ಪ್ರಾಣಿಗಳನ್ನು ಎಸೆದೆಡೆ ಕಾಣಬಹುದು. ಉದಾಹರಣೆಗೆ: ರಣಹದ್ದುಗಳು, ಬಿಳಿ ರಣಹದ್ದುಗಳು ಮುಂತಾದವು.ಇನ್ನೊಂದು ಬಗೆಯ ಹಿಂಸ್ರಾ ಪಕ್ಷಿಗಳು ರಾತ್ರಿಯ ವೇಳೆ ತಮ್ಮ ಬೇಟೆಗಾಗಿ ಹುಡುಕುತ್ತವೆ. ಹಗಲಲ್ಲಿ ಇವುಗಳ ಚಟುವಟಿಕೆ ಕಮ್ಮಿ.ಉದಾಹರಣೆಗೆ: ಗೂಬೆಗಳು, ಹಾಲಕ್ಕಿ ಮುಂತಾದವು.
ಮೊದಲೆರಡು ಹೇಳಿದ ಹಿಂಸ್ರಾ ಪಕ್ಷಿಗಳು ಸಾಮಾನ್ಯವಾಗಿ ಬಾನಿನಲ್ಲಿ ಅತಿ ಎತ್ತರದಲ್ಲಿ ಹಾರುತ್ತವೆ. ಇವುಗಳಷ್ಟು ಎತ್ತರದಲ್ಲಿ ಮತ್ಯಾವಹಕ್ಕಿಯೂ ಹಾರಲಾರವು. ಹಿಂಸ್ರಾ ಪಕ್ಷಿಗಳು ಕಣ್ಣು ತುಂಬಾ ತೀಕ್ಷ್ಣವಾಗಿದ್ದು ಸೂಕ್ಷ್ಮ ವಿವರಗಳೂ ಸ್ಪಷ್ಟವಾಗಿ ಕಾಣುತ್ತವೆ. ಸಾಮಾನ್ಯವಾಗಿ ಇಲಿ,ಚಿಕ್ಕ ಗಾತ್ರದ ಹಕ್ಕಿಗಳು, ಮೀನು, ಕಪ್ಪೆ, ಹಾವುಗಳು ಮುಂತಾದವು ಇವುಗಳ ಆಹಾರ. ಬೇಟೆಯಾಡಲು ಅನುವಾಗುವಂತೆ ಇವುಗಳ ಕೊಕ್ಕು,ಕಾಲು, ಕಾಲಿನ ಉಗುರುಗಳು ಮತ್ತು ಬಲಿಷ್ಟ ರೆಕ್ಕೆ ಮಾರ್ಪಾಟಾಗಿದೆ. ಹಿಂಸ್ರಾ ಪಕ್ಷಿಗಳು ಬಾನಂಗಳದ ರಾಜರಿದ್ದಂತೆ.
ಇನ್ನೂ ಗಿಡ, ಮರ ಮತ್ತು ಬಳ್ಳಿಗಳನ್ನು ಅವಲಂಬಿಸಿರುವ ಪಕ್ಷಿಗಳ ಈ ಗುಂಪಿಗೆ ಹೆಚ್ಚು ಪಕ್ಷಿ ವರ್ಗಗಳು ಸೇರುತ್ತವೆ. ಸಾಮಾನ್ಯವಾಗಿ ಊರಿನಹೊರಗೆ, ಬಯಲು ಪ್ರದೇಶದಲ್ಲಿ, ಜೌಗು ಪ್ರದೇಶದಲ್ಲಿ, ಗಿಡ, ತೋಟ, ಹಣ್ಣುಗಳ ಮರ ಎಲ್ಲೆಡೆ ವಿವಿಧ ಬಗೆಯ ಪಕ್ಶಿಗಳು ನೋಡಲು ಸಿಗುತ್ತವೆ.ಈ ಗುಂಪಿಗೆ ಸೇರುವ ಹಕ್ಕಿಗಳ ಬಗ್ಗೆ ತುಂಬಾ ವಿವರ ನೀಡಲು ಇಲ್ಲಿ ಸಾದ್ಯವಾಗುವುದಿಲ್ಲ. ಈ ವರ್ಗಕ್ಕೆ ಸೇರುವ ಪಕ್ಷಿಗಳ ಸಾಮಾನ್ಯಆಹಾರಗಳು ಸಣ್ಣ ಹುಳುಗಳು, ಕೀಟಗಳು, ಹಣ್ಣುಗಳು, ಕಾಲುಗಳು, ಸರಿಸೃಪಗಳು, ಹೂವಿನ ಮಕರಂದಗಳು, ಕಪ್ಪೆಗಳು ಹೀಗೆ ಹತ್ತು ಹಲವು.ಈ ಗುಂಪಿಗೆ ಸಣ್ಣ ಪಕ್ಷಿಗಳಿಂದ ಹಿಡಿದು ಮಂಗಟ್ಟೆಯ ವರೆಗೆ ಎಲ್ಲಾ ಗಾತ್ರದ ಪಕ್ಶಿಗಳು ಸೇರಿವೆ. ಭೌಗೋಳಿಕ ಪ್ರದೇಶದ ಮೇಲೆ ವಿವಿಧಹಕ್ಕಿಗಳನ್ನು ನೋಡಬಹುದು. ಮರದ ಪೋಟರೆಗಳಲ್ಲಿ, ರೆಂಬೆಗಳ ಕವಲುಗಳಲ್ಲಿ ನೆಲದ ಮೇಲೆ, ನೆಲ ಕೊರೆದು ಮಾಡಿದ ರಂದ್ರಗಳಲ್ಲಿ,ಮಣ್ಣನ್ನು ಮೆತ್ತಿ ತಾನೇ ನಿರ್ಮಿಸಿದ ಗೂಡುಗಳಲ್ಲಿ ಇವುಗಳು ಸಂತಾನೋತ್ಪತ್ತಿ ಮಾಡುತ್ತವೆ. ಉದಾಹರಣೆಗೆ: ಗೊರವಾಂಕ, ಗೌಜಲಹಕ್ಕಿ,ನವಿಲು, ಚಿಟವಗಳು, ಗಿಳಿಗಳು, ಕೆಂಬೂತ, ನೀಲಕಂಠ, ಮಂಗಟ್ಟೆ, ಕುನ್ಡೆ ಕುಸ್ಕಾ, ಕುಟ್ರು ಹಕ್ಕಿ, ಮರಕುಟಿಕ, ನೆಲ ಗುಬ್ಬಿ, ಕಾಜಾಣ, ಗೀಜಗ,ರಾಟವಾಳ ಇತ್ಯಾದಿ.
ಪಕ್ಷಿಗಳು ಯಾಕೆ ಬೇಕು?
"ಯಾವ ಪ್ರದೇಶದಲ್ಲಿ ಪಕ್ಶಿಗಳು ಸ್ವಚ್ಚಂದವಾಗಿ ಇರುತ್ತವೋ ಅದು ಆರೋಗ್ಯ ಪೋರ್ಣ, ಸಮೃದ್ದಿ ಭರಿತ ಪರಿಸರದ ಸಂಕೇತ".
ಪಕ್ಷಿಗಳಿಗೆ ಆಹಾರ, ಗೂಡುಕಟ್ಟಲು ಸ್ಥಳ ರಕ್ಶಣೆಯನ್ನು ಗಿಡ-ಮರ ಒದಗಿಸುತ್ತದೆ. ಪ್ರತಿಯಾಗಿ ಬೀಜ ಪ್ರಸರಣ, ಕೀಟ ನಿಯಂತ್ರಣ ಪಾರಾಗಸ್ಪರ್ಶ, ಮಣ್ಣಿನ ಸಾರ ಹೆಚ್ಚಿಸುವ ಕಾರ್ಯಗಳನ್ನು ಪಕ್ಶಿಗಳು ಮಾಡುತ್ತವೆ. ಈ ಕ್ರಿಯೆ ಕಾಲಕಾಲದಿಂದ ನಿರಂತ, ಇದು ವಿಕಾಸ ಚಕ್ರ. ಈಹಿಂದೆಯೇ ತಿಳಿಸಿದಂತೆ ನಿರ್ದಿಷ್ಟ ಪರಿಸರಕ್ಕೆ ಸಿರ್ದಿಷ್ಟ ಮರಗಳಿಗೆ - ಹಣ್ಣುಗಳಿಗೆ ನಿರ್ದಿಷ್ಟ ಪಕ್ಷಿ ಸಮೂಹ ಬರುತ್ತದೆ. ಹಣ್ಣು ತಿಂದು ಅದೇಪ್ರಾಂತ್ಯದ ಮತ್ತೊಂದೆಡೆ ಹಿಕ್ಕೆ ಹಾಕಿ ಹಿಕ್ಕೆಯಲ್ಲಿ ಬೀಜ ಪ್ರಸಾರಣ ಮಾಡುತ್ತದೆ. ಮರವೇ ಇಲ್ಲದಿದ್ದಲ್ಲಿ ಹಕ್ಕಿಯೂ ಇಲ್ಲಾ, ಒಟ್ಟು ಪ್ರಬೇದವೇಕಂಡುಬರುವುದಿಲ್ಲ. ಹಾಗೆಯೇ ಪರಿಸರದ ಸಮತೋಲನದಲ್ಲಿಯೂ ಭಾಗಿಯಾಗುತ್ತವೆ. ಗಿದಮರಗಳಿಗೆ ಮುತ್ತಿಗೆ ಹಾಕುವ ಕೀಟಗಲನ್ನು ತಿಂದುಗಿಡ-ಮರಗಳ ರಕ್ಷಣೆಗೆ ಕಾರಣವಾದರೆ, ಕೋಟ್ಯಂತರ ಕೀಟಗಳ ಸಂತತಿ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಹಾಗೆಯೇ ಸಸ್ಯಗಳಸಂತಾನಾಭಿವೃದ್ದಿಗೆ ಪಾರಾಗಾಸ್ಪರ್ಶವೂ ಮಹತ್ತರವಾದುದ್ದು, ಹೂವಿನ ಮಧುವನ್ನು ಹೀರಲು ಬರುವ ಹಕ್ಕಿಗಳು ಪಾರಾಗಾಸ್ಪರ್ಶಕ್ಕೂಸಹಕಾರಿ. ಇಲಿ ಮತ್ತು ಹೆಗ್ಗಣಗಳ ಸಂತತಿಯನ್ನು ನಿಯಂತ್ರನದಲ್ಲಿ ಇಡಲು ಹಿಂಸ್ರಾ ಪಕ್ಶಿಗಳ ಪಾತ್ರ ದೊಡ್ಡದು. ಪಕ್ಶಿಗಳ ಹಿಕ್ಕೆಯೂ ಕೂಡಮಣ್ಣಿಗೆ ಅತಿ ಮುಖ್ಯವಾದ ಸಾರ.
ಇಷ್ಟೆಲ್ಲಾ ವಿವಿಧ ಪ್ರಭೇದ, ಪಕ್ಷಿಸಂಕುಲ ನೋಡಲು ಎಲ್ಲಾ ಭಾಗದಲ್ಲಿಯೂ ಸಿಗುತ್ತದೆಯೇ? ಖಂಡಿತಾ ಇಲ್ಲಾ. ಆಯಾಪ್ರದೇಶಕ್ಕನುಗುಣವಾಗಿ,ಪರಿಸರದ ಒತ್ತಡಕ್ಕನುಗುಣವಾಗಿ, ಆಹಾರ, ವಾತಾವರಣ, ಗಿಡಗಳು, ಮರಗಳು, ಕಾಡುಗಳಿಗೆ ಅನುಗುಣವಾಗಿ ಪಕ್ಷಿಸಂಕುಲವಿಂಗಡನೆಯಾಗಿದೆ. ಉದಾಹರಣೆಗೆ: ಬಯಲು ಸೀಮೆಯ ಪ್ರದೇಶದಲ್ಲಿ ಕಂಡು ಬರುವ ಪಕ್ಷಿಗಳು ಮಲೆನಾಡಿನಲ್ಲಿ ಕಾಣುವುದಿಲ್ಲ. ಹಾಗೆಯೇಮಲೆನಾಡಿನ ಪರಿಸರದಲ್ಲಿ ಸಿಗುವ ಎಷ್ಟೋ ಜೀವರಾಶಿಗಳು ಬಯಲುಸೀಮೆಯಲ್ಲಿ ಕಂಡುಬರುವುದಿಲ್ಲಾ. ಪ್ರತಿ ಪ್ರದೇಶಕ್ಕೂ ಅದರದೇ ವಿಶೆಷತೆಇದೆ. ನೀವು ರಾಜ ಮಂಗಟ್ಟೆಯನ್ನು ನೋಡಬೇಕಾದರೆ ಪಶ್ಚಿಮಘ್ಹಟ್ಟಗಳಿಗೆ ಹೋಗಬೇಕು. ಹಾಗೆಯೇ ಕಾಕರಣೆ ಹಕ್ಕಿಯೂ ಕೂಡ. ಈ ಹಕ್ಕಿಗಳುಪಶ್ಚಿಮಘಟ್ಟಗಳಿಗೆ ಸೀಮಿತ. ಹಾಗೆಯೇ ಎರ್ಲಡ್ಡು ಪಕ್ಷಿಯನ್ನು ನೋಡಬೇಕಾದರೆ ಬಯಲು ಸೀಮೆಗೆ ಬರಬೇಕು!
ಈ ಎಲ್ಲಾ ಚಟುವಟಿಕೆಗಳು ನಮ್ಮಿಂದ ಹೊರತಾಗಿ ನಡೆಯುತ್ತಿರುತ್ತದಾ? ಯೋಚಿಸಿ ನೋಡಿದರೆ ಎಲ್ಲವೂ ನಮ್ಮ ನಡುವೆಯೇನಡೆಯುತ್ತಿರುತ್ತದೆ. ನಮ್ಮ ಬದುಕಿನ ಜನ್ಜಡದಲ್ಲಿ ಈ ವಿಸ್ಮಯ, ಆನಂದಗಳನ್ನು ನೋಡುವ ಕಣ್ಣು ಕಲೆದುಕೊನ್ಡಿರುತ್ತೇವೆ ಅಷ್ಟೇ. ನಮಗೆಲ್ಲಾತಿಳಿದಿರುವಂತೆ ಮನುಷ್ಯ ಮತ್ತು ಪಕ್ಷೀಯಾ ಸಂಬಂಧ ನಾಗರೀಕತೆ ಆರಂಭದಿಂದ ಜೊತೆಯಲ್ಲೇ ಬಂದಿದೆ. ಇಂದಿಗೂ ಕೆಲವು ಪಕ್ಷಿಗಳುಮನುಷ್ಯನ ನಾಗರೀಕಥೆಯಲ್ಲೇ ಸಾಗಿ ಬಂದಿದೆ. ಅವನ ಎಲ್ಲಾ ಚಟುವಟಿಕೆಯಲ್ಲೂ ಭಾಗಿಯಾಗಿ ಮನುಷ್ಯನೊಂದಿಗೆ ಇಷ್ಟು ದಿನಗಳ ಕಾಲ ರೆಕ್ಕೆಬಡಿದವು. ಅವುಗಳಲ್ಲಿ ಅತಿ ಪ್ರಮುಖವಾದುವುಗಳು ಅಂದರೆ ಗುಬ್ಬಿ, ಕಾಗೆ, ಗೊರವಾಂಕ, ಗಿಳಿ, ಕೊಕ್ಕರೆಗಳು ಇತ್ಯಾದಿ. ಆದರೆ ನಮ್ಮನಾಗರೀಕತೆಯಲ್ಲಾದ ಇತ್ತೀಚಿನ ಶೀಘ್ರ ಬದಲಾವಣೆಯ ಹೊಡೆತಕ್ಕೆ ಗುಬ್ಬಿಗಳು ಇಂದು ವಿರಳವಾಗಿವೆ. ಮುಂದೆ ಇದೇ ವಿಪತ್ತು ಇತರೆಪಕ್ಷಿಗಳಿಗೂ ಮುಂದುವರೆಯುವ ಎಲ್ಲಾ ಸೂಚನೆಗಳು ಸಿಕ್ಕಿಯಾಗಿದೆ. ಇಂದು ನಾವುಗಳು ಸಕಾಕ ಜೀವ ಸಂಕುಲವನ್ನು ಕಡೆಗನಿಸಿಮುಂದುವರೆಯುತ್ತಿದ್ದೇವೆ. ಈ ಭೂಮಿಯ ಹಕ್ಕು ಸಂಪೂರ್ಣ ನಮಗೇ ಎಂಬ ಬ್ರಮೆಯಲ್ಲಿ ಎಲ್ಲವನ್ನೂ ಕಳೆದುಕೊಳ್ಳುವ ಹಂತದಲ್ಲಿದ್ದೇವೆ.
ಗೌರೀಶ್ ಕಪನಿ
(ಹೊಸದಿಗಂತ ಪತ್ರಿಕೆಗಾಗಿ ಬರೆದ ಸಂಪೂರ್ಣ ಲೇಖನ)